

ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸ೦ಘ ನಿಯಮಿತ. ಕಡಬ, ದಕ್ಷಿಣ ಕನ್ನಡ ಜಿಲ್ಲಾ, ಕರ್ನಾಟಕ ರಾಜ್ಯ.
A partner for life.
ನಮ್ಮ ಬಗ್ಗೆ
ಸೌಭಾಗ್ಯ ವಿಕಲ ಚೇತನರ ಪತ್ತಿನ ಸಹಕಾರ ಸಂಘ ನಿಯಮಿತ. ಕಡಬ, ದಕ್ಷಿಣ ಕನ್ನಡ ಜಿಲ್ಲೆ - ಕರ್ನಾಟಕ ರಾಜ್ಯ
ಈ ಸಹಕಾರ ಸಂಘವು ಮಾನ್ಯ ಶ್ರೀ ಬಾಲಚಂದ್ರ ಎಚ್ ಸ್ಥಾಪಕ ಅಧ್ಯಕ್ಷರು ಇವರ ನೇತೃತ್ವದಲ್ಲಿ ದಿನಾಂಕ 21-01-2022 ರಂದು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಪ್ರಕರಣ 8ರ ಅನ್ವಯ ಮಾನ್ಯ ಎಸ್ ಜಿಯಾವುಲ್ಲಾ ಭಾ. ಆ. ಸೇ. ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ ಬೆಂಗಳೂರು ಇವರ ಮೂಲಕ ನೋಂದಾವಣೆಗೊಂಡಿರುತ್ತದೆ. ಈ ಸಂಘವು ಕರ್ನಾಟಕ ರಾಜ್ಯ ಕಾರ್ಯವ್ಯಾಪ್ತಿ ಯನ್ನು ಹೊಂದಿರುತ್ತದೆ.ಅಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿಗಳ ಸಮರ್ಥ ನಾಯಕತ್ವದಲ್ಲಿ ಸಂಘವು ರೂ 7,81,000 ಷೇರು ಬಂಡವಾಳ ಮತ್ತು 781 ಸಂಸ್ಥಾಪಕ ಸದಸ್ಯರೊಂದಿಗೆ ತನ್ನ ದಿಟ್ಟ ಹೆಜ್ಜೆಯನ್ನು ಇಟ್ಟಿದೆ.

Read More
ಉಳಿತಾಯ ಖಾತೆ
ನಾವು ನಿಮ್ಮ ಸಂಪತ್ತನ್ನು ವೃದ್ಧಿಸುವಲ್ಲಿ ಸಹಾಯ ಮಾಡಲು ಆಕರ್ಷಕ ಬಡ್ಡಿ ದರಗಳೊಂದಿಗೆ ಸುರಕ್ಷಿತ ಉಳಿತಾಯ ಖಾತೆಗಳನ್ನು ನೀಡುತ್ತೇವೆ.
ಪುನರಾವರ್ತಿತ ಠೇವಣಿ ಖಾತೆ
ನಾವು ನಿಮಗೆ ನಿಯಮಿತವಾಗಿ ಠೇವಣಿ ಹಾಕಲು ಮತ್ತು ಖಚಿತವಾದ ವಾಪಸು ನೀಡಲು ಸಹಾಯ ಮಾಡುವ ಲವಚಿಕ ಪುನರಾವರ್ತಿತ ಠೇವಣಿ ಆಯ್ಕೆಗಳು ಒದಗಿಸುತ್ತೇವೆ.
ಸ್ಥಿರ ಠೇವಣಿ ಖಾತೆ
ನಾವು ನಿಮ್ಮ ಉಳಿತಾಯಕ್ಕೆ ಸುರಕ್ಷಿತ ಮತ್ತು ಖಚಿತವಾದ ವಾಪಸು ನೀಡಲು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಸ್ಥಿರ ಠೇವಣಿ ಖಾತೆಗಳನ್ನು ನೀಡುತ್ತೇವೆ.
ದೈನಂದಿನ ಠೇವಣಿ ಖಾತೆಗಳು
ನಾವು ದೈನಂದಿನ ಉಳಿತಾಯಕ್ಕಾಗಿ ಸುಲಭ ಠೇವಣಿಗಳು ಮತ್ತು ಆಕರ್ಷಕ ಬಡ್ಡಿ ದರಗಳೊಂದಿಗೆ ಪಿಗ್ಮಿ ಠೇವಣಿ ಯೋಜನೆಗಳನ್ನು ಒದಗಿಸುತ್ತೇವೆ.
Our
ಸೌಭಾಗ್ಯ ವಿಕಲಚೇತನ ಸೇವಾ ಟ್ರಸ್ಟ್ (ರಿ.) ಸುಳ್ಯ 05/06/2017 ರಂದು ಸುಳ್ಯ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ವಿಕಲಚೇತನರು ಹಾಗೂ ಅವರ ಪೋಷಕರು, ಜನ ಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಹಾಗೂ ಗೌರವ ಸಲಹಾ ಸಮಿತಿ ಸದಸ್ಯರು ಇವರ ಮೂಲಕ ಪೂರ್ವಭಾವಿ ಸಭೆಯನ್ನು ನಡೆಸಿ ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸ್ವ-ಉದ್ಯೋಗ ಹಾಗೂ ಇತರ ಕ್ಷೇತ್ರಗಳಲ್ಲಿ ಮುನ್ನಡೆಸುವ ಕುರಿತು ಧ್ಯೇಯ-ಉದ್ದೇಶಗಳನ್ನು ರಚನೆ ಮಾಡಿ ಆಡಳಿತ ಮಂಡಳಿಯನ್ನು ರಚಿಸಿಕೊಂಡು ನೋಂದಾವಣೆ ಮಾಡಿಕೊಳ್ಳಲಾಯಿತು. ಸೇವಾ ಟ್ರಸ್ಟ್ ಮುನ್ನಡೆಸುವ ಸಮಯದಲ್ಲಿ ಸದಸ್ಯರು ಸ್ವ-ಉದ್ಯೋಗ ಹಾಗೂ ಇತರೆ ಯೋಜನೆಗಳ ಮೂಲಕ ತಮ್ಮ ಆರ್ಥಿಕ ಪ್ರಗತಿಯನ್ನು ಬೆಳೆಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಸ್ವಾಭಿಮಾನದ ಸ್ವಾವಲಂಬಿ ಬದುಕು ನಡೆಸಲು ಬಯಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸೌಭಾಗ್ಯ ವಿಕಲಚೇತನರ ಸೇವಾ ಟ್ರಸ್ಟ್ ಇದರ ಅಡಿಯಲ್ಲಿ ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ರಾಜ್ಯ-ಬೆಂಗಳೂರು ಇವರಿಗೆ ಮನವಿ ಸಲ್ಲಿಸಿ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ನಿಯಮಿತ. ಇದರ ರಚನೆ ಮಾಡುವ ಕುರಿತು ದಿನಾಂಕ 02/10/2019 ರಂದು ಪೂರ್ವಭಾವಿ ಸಭೆಯನ್ನು ನಡೆಸಿ ಮುಖ್ಯ ಪ್ರವರ್ತಕರು ಮತ್ತು ಪ್ರವರ್ತಕರನ್ನು ಆಯ್ಕೆ ಮಾಡಿ ಒಟ್ಟು 1000 ಸದಸ್ಯತ್ವ ಬಲದೊಂದಿಗೆ ಜನವರಿ 21, 2022 ರಂದು ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ರಾಜ್ಯ-ಬೆಂಗಳೂರು ಇವರ ಮೂಲಕ ನೋಂದಾವಣೆ ಪ್ರಮಾಣ ಪತ್ರ ಪಡೆದುಕೊಂಡು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬಂದಿರುತ್ತೇವೆ. ನಮ್ಮ ಸೇವಾ ಟ್ರಸ್ಟ್ ಹಾಗೂ ಸಹಕಾರ ಸಂಘದ ಅಡಿಯಲ್ಲಿ ಯೋಜನೆ ಹಾಗೂ ಸೌಲಭ್ಯಗಳನ್ನು ಪಡೆದುಕೊಂಡು ಭವ್ಯವಾದ ಬದುಕನ್ನು ಕಟ್ಟಿ ಸಮಾಜದಲ್ಲಿ ಗುರುತಿಸುವಂತೆ ಮಾಡುವಲ್ಲಿ ಸೌಭಾಗ್ಯ ವಿಕಲಚೇತನರ ಸ್ವ-ಸಹಾಯ ಗುಂಪುಗಳ ಮೂಲಕ ಹಾಗೂ ಸಹಕಾರ ಸಂಘದ ಅಡಿಯಲ್ಲಿ ಆರ್ಥಿಕ ವ್ಯವಹಾರವನ್ನು ನಡೆಸಿ ಸ್ವಾಭಿಮಾನದ ಬದುಕು ಬೆಳಗುವಂತಾಗಿದೆ. ಸಂಘದ ಮತ್ತು ಸೇವಾ ಟ್ರಸ್ಟ್ ನ ಯೋಜನೆ ಹಾಗೂ ಉದ್ದೇಶಗಳನ್ನು ಗೌರವಿಸಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾವಣೆ ಮಾಡಿಕೊಳ್ಳುತ್ತಿರುವುದರಿಂದ ಸೌಭಾಗ್ಯ ವಿಕಲಚೇತನರ ಸೇವಾ ಟ್ರಸ್ಟ್ ಮತ್ತು ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ನಿಯಮಿತ. ಇದರ ಪ್ರಧಾನ ಕಚೇರಿಯನ್ನು ಕರ್ನಾಟಕ ರಾಜ್ಯದ ಕಾರ್ಯ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಟ್ಟಣ ವ್ಯಾಪ್ತಿಯಲ್ಲಿ "ಸೌಭಾಗ್ಯ ಸಹಕಾರ ಸೌಧ" ಎಂಬ ನೂತನ ಕಟ್ಟಡವನ್ನು ರಚನೆ ಮಾಡಿ ಉದ್ಘಾಟನೆ ನಡೆಸಿಕೊಂಡು ಪ್ರತಿಯೊಬ್ಬ ವಿಕಲಚೇತನರ ಸೇವೆಯನ್ನು ಸುಲಭ ರೀತಿಯಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ನೀಡುವುದರ ಮೂಲಕ ಪ್ರತಿಯೊಬ್ಬ ವಿಕಲಚೇತನರ ಬದುಕಿನಲ್ಲಿ ಸೌಭಾಗ್ಯದ ಬೆಳಕು ನಂದಾದೀಪವಾಗಿ ಬೆಳಗುವಂತೆ ನಮ್ಮ ಉದ್ದೇಶ ಹಾಗೂ ಗುರಿಯನ್ನು ಮುನ್ನಡೆಸುವಲ್ಲಿ ಎಲ್ಲರ ಸಹಕಾರ ಮತ್ತು ಹಾರೈಕೆಗಳನ್ನು ಪ್ರೀತಿಪೂರ್ವಕವಾಗಿ ಆಶಿಸುತ್ತಿದ್ದೇನೆ.
ನಮ್ಮ
ಸಾಲ ಸೌಲಭ್ಯಗಳು:ವಿಕಲಚೇತನರಿಗೆ ಹಾಗೂ ಜನಸಾಮಾನ್ಯರಿಗೆ ಅವಕಾಶ
+ ಸಂತೋಷಿಯಾದ ಗ್ರಾಹಕರು
+ ಶಾಖೆಗಳು
+ ಸೇವೆಗಳು
+ ಕಠಿಣ ಪರಿಶ್ರಮಿಗಳು

ಪುನರಾವರ್ತಿತ ಠೇವಣಿ ಖಾತೆ
ನಾವು ನಿಮ್ಮನ್ನು ನಿಯಮಿತವಾಗಿ saving ಮಾಡಲು ಹಾಗೂ ಖಚಿತವಾದ ತಿರುಗುಮಾಡಿದ ಲಾಭಗಳನ್ನು ಗಳಿಸಲು ಅನುವು ನೀಡುವ ಆಕರ್ಷಕ ಪುನರಾವರ್ತಿತ ಠೇವಣಿ ಆಯ್ಕಗಳನ್ನು ನೀಡುತ್ತೇವೆ.
- 1 ವರ್ಷ - 5%
- 2 ವರ್ಷ - 7%
- 3 ವರ್ಷ - 8.5%
ಇಲ್ಲಿ ಕ್ಲಿಕ್ ಮಾಡಿ ನೋಂದಣಿ ಮಾಡಿ

ಸ್ಥಿರ ಠೇವಣಿ ಖಾತೆ
ನಾವು ನಿಮ್ಮ ಠೇವಣಿಗಳ ಮೇಲೆ ಸುರಕ್ಷಿತ ಮತ್ತು ಖಚಿತವಾದ ಲಾಭಗಳನ್ನು ಗಳಿಸಲು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಸ್ಥಿರ ಠೇವಣಿ ಖಾತೆಗಳು ನೀಡುತ್ತೇವೆ.
ಕಾಲಾವಧಿ | ಸಾಮಾನ್ಯ ವ್ಯಕ್ತಿಗೆ | ಅಂಗವಿಕಲ/ ಹಿರಿಯ ನಾಗರಿಕರಿಗೆ |
---|---|---|
1 ವರ್ಷ | 8.5% | 9% |
2 ವರ್ಷ | 10.5% | 11% |
3 ವರ್ಷ | 12% | 12% |
ಇಲ್ಲಿ ಕ್ಲಿಕ್ ಮಾಡಿ ನೋಂದಣಿ ಮಾಡಿ

ದೈನಂದಿನ ಠೇವಣಿ ಖಾತೆಗಳು
ನಾವು ಸುಲಭ ಠೇವಣಿಗಳೊಂದಿಗೆ ಮತ್ತು ಆಕರ್ಷಕ ಬಡ್ಡಿ ದರಗಳೊಂದಿಗೆ ದೈನಂದಿನ savingಗಳಿಗೆ ಪಿಗ್ಮಿ ಠೇವಣಿ ಯೋಜನೆಗಳನ್ನು ನೀಡುತ್ತೇವೆ.
ಇಲ್ಲಿ ಕ್ಲಿಕ್ ಮಾಡಿ ನೋಂದಣಿ ಮಾಡಿ
SGH
ವಿಶೇಷ ಚೇತನರು ಹಾಗೂ ವಿಶೇಷ ಚೇತನರ ಪೋಷಕ ಸದಸ್ಯರು ಸೇರಿಕೊಂಡು ಸಹಕಾರ ತತ್ವದ ಅಡಿಯಲ್ಲಿ ತಮ್ಮಿಂದ ತಾವೇ ಸಹಾಯ ಮಾಡಿಕೊಳ್ಳುವ ಗುಂಪಿಗೆ ಸೌಭಾಗ್ಯ ವಿಕಲಚೇತನರ ಸ್ವ-ಸಹಾಯ ಗುಂಪು ಎಂದು ಕರೆಯುತ್ತಾರೆ. ಅಂದರೆ ಗುಂಪಿನ ತೀರ್ಮಾನದಂತೆ ಎಲ್ಲಾ ಸದಸ್ಯರುಗಳು ಉಳಿತಾಯ ಮಾಡಿದ ಹಣದಲ್ಲಿ ಎಲ್ಲರ ಒಪ್ಪಿಗೆಯ ಮೇರೆಗೆ ಗುಂಪಿನ ಸದಸ್ಯರಿಗೆ ಸಾಲ ನೀಡಬಹುದು. ಹಾಗೂ ಅವಶ್ಯಕತೆ ಕಂಡುಬಂದಲ್ಲಿ ಯೋಜನೆಯ ಅನುಗುಣವಾಗಿ ಸಹಕಾರ ಸಂಘದ ಅಡಿಯಲ್ಲಿ ಸದಸ್ಯರಿಗೆ ಸಾಲವನ್ನು ಪಡೆದುಕೊಳ್ಳಲು ಅವಕಾಶವನ್ನು ನೀಡುವುದರ ಮೂಲಕ ಆ ಹಣದಿಂದ ಸಾಲ ಪಡೆದ ಸದಸ್ಯರು ಯಾವ ಉದ್ದೇಶಕ್ಕಾಗಿ ಸಾಲ ಪಡೆದಿರುತ್ತಾರೆ ಅದೇ ಉದ್ದೇಶಕ್ಕಾಗಿ ಬಳಸಿಕೊಂಡು ತಮ್ಮ ಬಾಕಿ ಉಳಿತಾಯದ ಜೊತೆಗೆ ಕಂತು ಪ್ರಕಾರವಾಗಿ ಬಡ್ಡಿ ಸಹಿತ ಸಾಲ ಮರುಪಾವತಿ ಮಾಡುವಂತಹ ಸಹಾಯವನ್ನು ಪಡೆಯಲು ಅರ್ಹರಿರುತ್ತಾರೆ. ಈ ಮೂಲಕ ಕೋಟ್ಯಾಂತರ ವಿಕಲಚೇತನರು ಜಾಗೃತರಾಗಿದ್ದಾರೆ. ಪರಸ್ಪರ ಸಹಾಯವನ್ನು ಪಡೆಯುತ್ತಾರೆ. ಒಗ್ಗಟ್ಟಿನಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಕೂಡ ಗೆಲ್ಲುತ್ತಿದ್ದಾರೆ. ಮುಖ್ಯವಾಗಿ ಕುಟುಂಬದಲ್ಲಿನ ಹಣಕಾಸು ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ಯಶಸ್ವಿಯಾಗುತ್ತಿದ್ದಾರೆ. ತಮ್ಮ ಅವಶ್ಯಕತೆಗಳಿಗಾಗಿ ತಮ್ಮ ಉಳಿತಾಯದ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸ್ವಸಹಾಯ ಗುಂಪುಗಳ ಮೂಲಕ ಇತರರನ್ನು ಅವಲಂಬಿತರಾಗದೆ ತಮ್ಮಿಂದ ತಾವೇ ಬದಲಾವಣೆ ಯ ಭರವಸೆಯನ್ನು ಕಾಣುವುದರ ಮೂಲಕ ಸೌಭಾಗ್ಯದ ಬೆಳಕು ಬೆಳಗುವಂತಾಗಿದೆ.
ಸೌಭಾಗ್ಯ ವಿಕಲಚೇತನ ಸ್ವಸಹಾಯ ಗುಂಪಿನ ಉದ್ದೇಶಗಳು.
- ಉಳಿತಾಯ ಮನೋಭಾವನೆಯನ್ನು ಬೆಳೆಸುವುದು
- ಸರ್ಕಾರ, ಸಂಸ್ಥೆಯ ತರಬೇತಿ, ಸಭೆಗಳು ಮೂಲಕ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕ ರಾಗಿ ಉದ್ಯೋಗವನ್ನು ಕಲ್ಪಿಸಿ ಜಾಗೃತರಾಗುವುದು.
- ಸರಳ ಮತ್ತು ಸುರಕ್ಷಿತವಾದ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಬಲಿಷ್ಠವಾಗುವುದು.

ಸಂಪರ್ಕ
Address
ಎಸ್ ಆರ್ ಕೆ ಟವರ್ಸ್
ಮುಖ್ಯ ರಸ್ತೆ ಕಡಬ ದ.ಕ.- 574221
Call Us
+91 7760095717
Email Us
svccskadaba@gmail.com